ಜರ್ಮನಿಯಲ್ಲಿ ಕೆಲಸ ಮಾಡಲು ಮಾರ್ಗದರ್ಶನ ಬೇಕಿದ್ದರೆ, ಅದನ್ನು ಅತ್ಯುತ್ತಮವಾಗಿ ನೀಡುವ ಸಂಸ್ಥೆಗಳಲ್ಲಿ ಪ್ರೋ ರೆಕಗ್ನಿಷನ್ ಕೂಡಾ ಒಂದು. ಇದು ಜರ್ಮನ್ ಚೇಂಬರ್ ಆಫ್ ಕಾಮರ್ಸ್ ನ ಒಂದು ಭಾಗವಾಗಿದ್ದು, ಜರ್ಮನಿಯ ವಿದೇಶಾಂಗ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿದೆ. ಇವರ ಸೇವೆ ಸಂಪೂರ್ಣ ಉಚಿತ!
ಜರ್ಮನಿಯಲ್ಲಿಯ ನೀವು ನೇರವಾಗಿ ಕೆಲಸಕ್ಕೆ ಹೋಗುವ ಕುರಿತಾದ ಆಲೋಚನೆ ಹೊಂದಿದ್ದರೆ ಪ್ರೋ ರೆಕಗ್ನಿಷನ್ ಮಿಂದಾಣಕ್ಕೆ(ProRecognition - https://prorecognition.in/) ಭೇಟಿ ನೀಡಿ ಮತ್ತು ಅವರೊಡನೆ ಮಾತನಾಡಲು ಒಂದು ಹೊತ್ತನ್ನು ಗೊತ್ತು ಮಾಡಿಕೊಳ್ಳಿ!
ಪ್ರೋ ರೆಕಗ್ನಿಷನ್ ಅವರು ನಿಮಗೆ ಯಾವ ರೀತಿ ಸಹಾಯ ಮಾಡುತ್ತಾರೆ?
೧. ಪ್ರೋ ರೆಕಗ್ನಿಷನ್ ತಂಡದವರು ನಿಮ್ಮ ಅರ್ಹತೆಯನ್ನು ಪರೀಕ್ಷಿಸಲು ಮತ್ತು ನಿಮ್ಮ ಅರ್ಹತೆಗೆ ತಕ್ಕುದಾದ ಕೆಲಸವನ್ನು ಹುಡಿಕಿಕೊಳ್ಳಲು ಸಹಾಯ ಮಾಡುತ್ತಾರೆ.
೨. ನೀವು ಭಾರತದಲ್ಲಿ ಪಡೆದ ವಿದ್ಯಾರ್ಹತೆ (Degree/Diploma) ಜರ್ಮನಿಯ ಮಾನದಂಡಕ್ಕೆ ಹೊಂದಿಕೆಯಾಗುತ್ತದೆಯಾ ಎಂದು ಪರೀಕ್ಷಿಸುತ್ತಾರೆ. ಅದು "Berufsanerkennung" (ಪದವಿ ಮಾನ್ಯತೆ) ಇರಬಹುದು ಅಥವಾ "Zeugnisbewertung" (ಅಂಕಪಟ್ಟಿ) ಆಗಿರಬಹುದು.
೩. ಹಲವು ಕೆಲಸಗಳಿಗೆ (ವೈದ್ಯ ವಿಜ್ಞಾನ, ಇಂಜಿನಿಯರಿಂಗ್, ಶಿಕ್ಷಕ/ಕಿ) ಜರ್ಮನ್ ನುಡಿಯ ಜ್ಞಾನ ಕಡ್ಡಾಯ. ಯಾವ ಯಾವ ಕೆಲಸಕ್ಕೆ ಯಾವ ಮಟ್ಟದ ಜರ್ಮನ್ ಜ್ಞಾನ ಅಗತ್ಯ ಮತ್ತು ಅದನ್ನು ಎಲ್ಲಿ ಮತ್ತು ಹೇಗೆ ಪಡೆಯಬಹುದು ಎಂದು ಮಾರ್ಗದರ್ಶನ ನೀಡುತ್ತಾರೆ.
೪. ನಿಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸವನ್ನು ಜರ್ಮನಿಯಲ್ಲಿ ಹುಡುಕಲು ಸಹಾಯ ಮಾಡುವುದಲ್ಲದೆ, ಅಲ್ಲಿ ಅಧಿಕೃತವಾಗಿ ಕೆಲಸ ಮಾಡಲು ಬೇಕಾದ ವೀಸಾ ಕುರಿತಾದ ಮಾಹಿತಿ ಮತ್ತು ಅದನ್ನು ಪಡೆಯಲು ಬೇಕಾದ ಅನುಕೂಲಗಳನ್ನು ಮಾಡಿಕೊಡುತ್ತಾರೆ.


